ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಶೇಖರಗೌಡ - Kannada Sahitya Parishad election
🎬 Watch Now: Feature Video
ಕುಷ್ಟಗಿ (ಕೊಪ್ಪಳ): ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ಗೆ ಮೇ.9 ರಂದು ಚುನಾವಣೆ ನಡೆಯಲಿದ್ದು, ಏಪ್ರಿಲ್ 5 ರಂದು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸುವುದಾಗಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ನಿಯೋಜಿತ ಅಭ್ಯರ್ಥಿ ಶೇಖರಗೌಡ ಮಾಲಿ ಪಾಟೀಲ ತಿಳಿಸಿದ್ದಾರೆ. 'ಈ ಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಬಹುತೇಕ 25 ಸಾವಿರ ಮತಗಳ ಅಂತರದಿಂದ ಜಯಗೊಳಿಸುತ್ತೇನೆ. ಈಗಾಗಲೇ 30 ಜಿಲ್ಲೆಗಳಿಗೂ ಒಂದು ಬಾರಿ ಭೇಟಿ ನೀಡಿ ಮತಯಾಚಿಸಿರುವೆ ಎಂದರು.