ರಾಯಚೂರು ಶಾಲಾ ಪ್ರಾರಂಭೋತ್ಸವ: ಹುಮ್ಮಸ್ಸಿನಿಂದ ಶಾಲೆಗೆ ಆಗಮಿಸಿದ ಮಕ್ಕಳು - Raichuru School open News
🎬 Watch Now: Feature Video
ರಾಯಚೂರು: ಕೊರೊನಾ ಹಾವಳಿಯಿಂದ 10 ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಾಲೆಗಳು ಇಂದು ಪುನಾರಂಭಗೊಂಡಿವೆ. ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಜಿಲ್ಲೆಯ 830 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 451 ಸರ್ಕಾರಿ ಪ್ರೌಢ ಶಾಲೆ ಸೇರಿದಂತೆ ಅನುದಾನ, ಅನುದಾನ ರಹಿತ ಶಾಲೆಗಳಲ್ಲಿ ಇಂದಿನಿಂದ ತರಗತಿಗಳು ಆರಂಭಗೊಂಡಿವೆ. 10ನೇ ತರಗತಿ ಮಕ್ಕಳಿಗೆ ಬೆಳಗ್ಗಿನ ಸಮಯದಲ್ಲಿ ತರಗತಿಗಳು ಮತ್ತು 6 ರಿಂದ 9ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಸಮಯದಲ್ಲಿ ವಿದ್ಯಾಗಮ ಮೂಲಕ ತರಗತಿಗಳನ್ನು ನಡೆಸಲು ಶಾಲೆಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.