ನಂಜುಂಡೇಶ್ವರನ ಸನ್ನಿಧಾನದಲ್ಲಿ ಕಲುಷಿತವಾಗುತ್ತಿದ್ದಾಳೆ ಕಪಿಲೆ - ನಂಜುಡೇಶ್ವರ ದೇವಾಲಯ
🎬 Watch Now: Feature Video
ಮೈಸೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ನಂಜನಗೂಡಿನ ಕಪಿಲಾ ನದಿ ಕಲುಷಿತಗೊಳ್ಳುತ್ತಿದ್ದಾಳೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ನಂಜನಗೂಡಿಗೆ ದೇಶ-ವಿದೇಶಗಳಿಂದಲೂ ಭಕ್ತರು ಆಗಮಿಸಿ ಇಲ್ಲಿನ ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಾರೆ. ಆದರೆ ದೇವಾಲಯದ ಪಕ್ಕದಲ್ಲಿ ಹರಿಯುವ ಕಪಿಲಾ ನದಿಗೆ, ಬಡಾವಣೆ ಸ್ನಾನದ ಗೃಹಗಳು ಹಾಗೂ ಕಾರ್ಖಾನೆಯ ಕಲುಷಿತ ನೀರು ಸೇರುತ್ತಿದೆ. ಪ್ರತಿನಿತ್ಯ ಈ ನೀರನ್ನೇ ನಂಜುಂಡೇಶ್ವರನ ಅಭಿಷೇಕಕ್ಕೂ ಬಳಸಲಾಗುತ್ತಿದೆ. ಆದರೆ ಈ ಬಗ್ಗೆ ಸ್ಥಳೀಯ ಆಡಳಿತಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.