ಕಾಂಗ್ರೆಸ್ ನಾಯಕರ ಆರೋಪಕ್ಕೆ ರಾಮದಾಸ್ ತಿರುಗೇಟು
🎬 Watch Now: Feature Video
ಕಾಂಗ್ರೆಸ್ನ ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುವ ಸಂದರ್ಭ ಬಂದಿದೆ. ಮಾಜಿ ಸಚಿವರಾದ ಡಿಕೆಶಿ ಹಾಗೂ ಚಿದಂಬರಂ ಬಂಧನದಿಂದ ಆ ಪಕ್ಷದ ಮುಖಂಡರು ವಿಚಲಿತರಾಗಿದ್ದಾರೆ. ಬಂಧನವಾಗಿದ್ದಕ್ಕೆ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡುವುದು ಸರಿಯಲ್ಲ. 72 ವರ್ಷಗಳ ಕಾಲ ಕಾಂಗ್ರೆಸ್ ಬಳಿ ಇಡಿ, ಐಟಿ ಇತ್ತು ಅಂತ ಒಪ್ಪಿಕೊಂಡರೆ, ಇದೀಗ ಇಡಿ, ಐಟಿ ಬಿಜೆಪಿ ಬಳಿ ಇವೆ ಅಂತ ಒಪ್ಪಿಕೊಳ್ಳಬಹುದು ಎಂದು ಶಾಸಕ ಎಸ್ ಎ ರಾಮದಾಸ್ ತಿರುಗೇಟು ನೀಡಿದ್ದಾರೆ.