ರಾಯಚೂರಿನಲ್ಲಿ ವರುಣನ ಸಿಂಚನ.. ಉಕ್ಕಿ ಹರಿಯುತ್ತಿರುವ ಹಳ್ಳ ಕೊಳ್ಳಗಳು.. - ರಾಯಚೂರಿನಲ್ಲಿ ಮಳೆ
🎬 Watch Now: Feature Video
ರಾಯಚೂರು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಸಿರವಾರ ತಾಲೂಕಿನ ಚಾಗಬಾವಿ ಗ್ರಾಮದ ಹಳ್ಳದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿದೆ. ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿರುವುದರಿಂದ ಸೇತುವೆ ಜಲಾವೃತ್ತಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಲಿಂಗಸೂಗೂರು ತಾಲೂಕಿನ ಜಾಹಗಿರ ನಂದಿಹಾಳ ಗ್ರಾಮದ ಬಳಿಯ ಸೇತುವೆಯೂ ಜಲಾವೃತ್ತಗೊಂಡು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಿನ್ನೆ ಸುರಿದ ಮಳೆಯಿಂದಾಗಿ, ಬರದಿಂದ ಖಾಲಿ ಖಾಲಿಯಾಗಿ ಎನಿಸುತ್ತಿದ್ದ ಜಿಲ್ಲೆಯ ಹಳ್ಳಗಳಿಗೆ ನೀರಿನಿಂದಾಗಿ ಜೀವಕಳೆ ಬಂದಿದೆ.