ಹಬ್ಬದ ಸಂಭ್ರಮದ ನಡುವೆ ನಗರಕ್ಕೆ ತುಂತುರು ಮಳೆ - ಸಿಲಿಕಾನ್ ಸಿಟಿ
🎬 Watch Now: Feature Video
ಬೆಂಗಳೂರು: ಸಿಲಿಕಾನ್ ಸಿಟಿಯ ಜನರು ಗಣೇಶ ಹಬ್ಬದ ಆಚರಣೆಯಲ್ಲಿ ಫುಲ್ ಬ್ಯುಸಿ ಇರುವಾಲೇ, ನಗರಕ್ಕೆ ವರುಣನ ಆಗಮನವಾಗಿದೆ. ಮಧ್ಯಾಹ್ನದ ವೇಳೆ ನಗರದಾದ್ಯಂತ ಸಾಧಾರಣ ಮಳೆಯಾಗಿದೆ. ಮೆಜೆಸ್ಟಿಕ್, ಶೇಷಾದ್ರಿಪುರಂ, ಜಯನಗರ, ಕಾರ್ಪೋರೇಷನ್ ಸರ್ಕಲ್,ಕೆಆರ್ ಮಾರುಕಟ್ಟೆ, ಯಶವಂತಪುರದಲ್ಲಿ ಮಳೆಯಾಗಿದೆ. ಆದರೆ, ಹಾನಿ ವರದಿಯಾಗಿಲ್ಲ. ರಜಾ ದಿನವಾದ್ದರಿಂದ ವಾಹನ ಸವಾರರ ಓಡಾಟ ಹೆಚ್ಚೇನು ಇರಲಿಲ್ಲ. ಹೀಗಾಗಿ ಮಧ್ಯಾಹ್ನದ ವೇಳೆ ಬಂದ ಮಳೆ ನಗರವನ್ನು ತಂಪಾಗಿಸಿತು.