ಸರ್ಕಾರಿ ಶಾಲೆಗೆ ಹೈಟೆಕ್ ಟಚ್.. ಖಾಸಗಿ ಶಾಲೆಗೆ ಬೈ ಬೈ, ಸರ್ಕಾರಿ ಶಾಲೆಗೆ ಜೈ ಜೈ.. - Kannada news
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದ ಸರ್ಕಾರಿ ಶಾಲೆ ಒಂದು ಕಾಲದಲ್ಲಿ ಪೂರ್ತಿ ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಕಳೆದ ಕೆಲ ವರ್ಷಗಳ ಹಿಂದಷ್ಟೇ ಸುತ್ತಮುತ್ತಲ ಪ್ರದೇಶದಲ್ಲಿ ಆರಂಭವಾದ ಇಂಗ್ಲೀಷ್ ಶಾಲೆಗಳಿಂದಾಗಿ ಈ ಸರ್ಕಾರಿ ಶಾಲೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದ ಪೋಷಕರು ತಾವೇ ಓದಿದ ಕನ್ನಡ ಶಾಲೆಯನ್ನು ಮರೆತು ಬಿಟ್ಟಿದ್ದರು. ಆದರೆ, ಇದೀಗ ಅದೇ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಎಂದಿನಂತೆ ತನ್ನ ಹಳೆಯ ವೈಭವವನ್ನ ನೆನಪಿಸುವಂತಿದೆ.