ಬೆಂಗಳೂರಿನ ಟೌನ್‌ಹಾಲ್ ಎದುರು ಇಂದಿನ ಪ್ರತಿಭಟನೆ ಮುಕ್ತಾಯ: ನಾಳೆ ಮುಂದುವರಿಸಲು ನಿರ್ಧಾರ - ಸೆಕ್ಷೆನ್ 144 ಜಾರಿ
🎬 Watch Now: Feature Video
ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಟೌನ್ ಹಾಲ್ ಬಳಿ ಕೈಗೊಂಡಿದ್ದ ಇಂದಿನ ಪ್ರತಿಭಟನೆ ಮುಕ್ತಾಯಗೊಂಡಿದ್ದು, ನಾಳೆ ಮತ್ತೆ ಮಂದುವರೆಸುವುದಾಗಿ ವಿವಿಧ ಸಂಘಟನೆಗಳು ನಿರ್ಧಾರ ಕೈಗೊಂಡಿವೆ. ಇವತ್ತು ನಿಷೇಧಾಜ್ಞೆ ನಡುವೆಯೂ ಅಪಾರ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸದ್ಯ ಪ್ರತಿಭಟನೆ ಕೈಬಿಟ್ಟ ಪ್ರತಿಭಟನಾಕಾರರು ಸ್ಥಳದಿಂದ ಹೊರ ನಡೆದಿದ್ದಾರೆ. ಪರಿಣಾಮ ವಾಹನ ದಟ್ಟನೆಯಲ್ಲಿ ಸಿಲುಕಿಕೊಂಡಿದ್ದ ವಾಹನ ಸವಾರರು ನಿಟ್ಟುಸಿರುಬಿಟ್ಟರು.