ನೂತನ ಮೋಟಾರು ವಾಹನ ಕಾಯ್ದೆ: ದಂಡ ಏರಿಕೆಗೆ ಖಂಡನೆ, ಹೆಲ್ಮೆಟ್ ಧರಿಸಿ ಪ್ರತಿಭಟನೆ - ಕನ್ನಡಪರ ಸಂಘಟನೆ
🎬 Watch Now: Feature Video
ಚಾಮರಾಜನಗರ: ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಹೆಚ್ಚಿಸಿದ ದಂಡದ ಕ್ರಮ ಖಂಡಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಚಾಮರಾಜೇಶ್ವರ ದೇಗುಲದಿಂದ ಭುವನೇಶ್ವರಿ ವೃತ್ತದವರೆಗೆ ಹೆಲ್ಮೆಟ್ ಧರಿಸಿ, ಸೈಕಲ್ ಸವಾರಿ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ರು. ಹೆಲ್ಮೆಟ್ ಕಡ್ಡಾಯ, ಇನ್ಸ್ಯೂರೆನ್ಸ್ ಕಡ್ಡಾಯ ಸ್ವಾಗತಾರ್ಹ. ಆದರೆ, ಬೇಕಾಬಿಟ್ಟಿ ದಂಡದ ಮೊತ್ತವನ್ನು ಏರಿಸಿರುವುದು ಸರಿಯಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲದೇ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.