ಕರ್ನಾಟಕದಲ್ಲಿ ಮರಾಠಿ ಕಾರ್ಯಕ್ರಮ ಆಯೋಜನೆ: ಟಿ. ಎಸ್ ನಾಗಾಭರಣ ಖಂಡನೆ - ಶಿವಾಜಿ ಪ್ರತಿಮೆ ಸ್ಥಾಪನೆ
🎬 Watch Now: Feature Video
ತುಮಕೂರು: ಬೆಳಗಾವಿ ಜಿಲ್ಲೆಯ ರಾಜಹಂಸಗಡ ಎಂಬಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ಮತ್ತು ಕೋಟೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಮರಾಠಿ ಭಾಷೆಯಲ್ಲಿಯೇ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಖಂಡನೀಯ. ಈ ಕುರಿತು ಈಗಾಗಲೇ ಪತ್ರ ಬರೆದು ಖಂಡಿಸಿದ್ದೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್ ನಾಗಾಭರಣ ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ. ಕನ್ನಡವೇ ಸಾರ್ವಭೌಮವಾಗಿರುತ್ತದೆ. ಇದು ಗೊತ್ತಿದ್ದರೂ ಕೂಡ ಬೆಳಗಾವಿ ಜಿಲ್ಲಾಧಿಕಾರಿಗಳು ಮರಾಠಿ ಭಾಷೆಯಲ್ಲಿ ಕಾರ್ಯಕ್ರಮ ವ್ಯವಸ್ಥೆ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು.