ಮಂಡ್ಯದಲ್ಲಿ ಸರಳ ಕ್ರಿಸ್ಮಸ್ ಆಚರಣೆಗೆ ಸಕಲ ಸಿದ್ಧತೆ - ಕ್ರಿಸ್ಮಸ್ ಆಚರಣೆಗೆ ಸಕಲ ಸಿದ್ಧತೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9990843-84-9990843-1608803938178.jpg)
ಮಂಡ್ಯ: ಪ್ರಸಿದ್ಧ ಸಂತ ಜೋಸೆಫರ ಚರ್ಚ್‌ನಲ್ಲಿ ಈ ಬಾರಿ ಸರಳ ಕ್ರಿಸ್ಮಸ್ ಆಚರಣೆಗೆ ಸಿದ್ಧತೆ ನಡೆದಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಅದ್ದೂರಿ ಆಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿಯ ಕ್ರಿಸ್ಮಸ್ ಕೇವಲ ಪ್ರಾರ್ಥನೆಗಷ್ಟೇ ಸೀಮಿತವಾಗಿದೆ. ಹಬ್ಬದ ದಿನದಂದು ನಡೆಯುವ ಬಲಿ ಪೂಜೆಯಲ್ಲಿಯೂ ಕೂಡಾ ಸೀಮಿತ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸದಿರಲು ನಿರ್ಧರಿಸಲಾಗಿದೆ.