ನಾಗಶಿವಲಿಂಗಕ್ಕೆ ವಿಧಿ ವಿಧಾನದಂತೆ ಪೂಜಾ ಕೈಂಕರ್ಯ - Nagalamadike village of Pavagada taluk of Tumkur district
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5887701-thumbnail-3x2-hrs.jpg)
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇಗುಲದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಬೃಹತ್ ನಾಗಶಿವಲಿಂಗಕ್ಕೆ ವಿಧಿ ವಿಧಾನದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಗ್ರಾಮದಲ್ಲಿಯೇ 45 ದಿನಗಳ ಹಿಂದೆ ನಾಗಲಿಂಗ ಮೂರ್ತಿಯನ್ನು ಸುಂದರವಾಗಿ ಕೆತ್ತನೆ ಮಾಡಿ ಸಂಪ್ರದಾಯದಂತೆ ಮರಳು ಹಾಗೂ ಮಣ್ಣಿನಲ್ಲಿ ಸಂರಕ್ಷಣೆ ಮಾಡಿ ಇರಿಸಲಾಗಿತ್ತು. ಬಳಿಕ ದೇಗುಲದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸಲುವಾಗಿ ಮಣ್ಣು ಹಾಗೂ ಮರಳಿನಿಂದ ಬೇರ್ಪಡಿಸಿ ವಿಧಿವಿಧಾನಗಳನ್ನು ಪೂರೈಸಲಾಯಿತು.