ಕೊರೊನಾ ಉಲ್ಬಣ.. ಮೈಸೂರಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಮುಗಿಬಿದ್ದ ಜನ
🎬 Watch Now: Feature Video
ಮೈಸೂರು: ಕೊರೊನಾದ ರೋಗ ಲಕ್ಷಣಗಳು ಇಲ್ಲದಿದ್ದರೂ, ಜನರು ಮುನ್ನೆಚ್ಚರಿಕೆಯಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಮುಗಿಬೀಳುತ್ತಿರುವುದು ನಗರದಲ್ಲಿ ಕಂಡುಬರುತ್ತಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದ್ದು, ಇದರ ಭಯದಿಂದ ಜನರು ಕೋವಿಡ್ ಪರೀಕ್ಷೆ ಕೇಂದ್ರಗಳ ಕಡೆ ಮುಖಮಾಡುತ್ತಿದ್ದಾರೆ. ಕಳೆದ ವಾರ ಪ್ರತಿದಿನ 3 ಸಾವಿರದಿಂದ 4 ಸಾವಿರ ಆರ್.ಟಿ.ಪಿ.ಸಿ.ಆರ್.ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು. ಆದರೆ ಈ ವಾರ ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಇರುವುದರಿಂದ ಹಾಗೂ ಸ್ವಂತ ಊರುಗಳಿಗೆ ತೆರಳಲು ಕೋವಿಡ್ ಪರೀಕ್ಷೆ ಅವಶ್ಯಕವಾಗಿರುವುದರಿಂದ ಜನರು ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಕ್ಯೂ ನಿಲ್ಲುತ್ತಿದ್ದಾರೆ.