ಕೊರೊನಾ ಭೀತಿ: ಗೋಕಾಕ್ನಲ್ಲಿ ನೀರಸ ಮತದಾನ - ಗೋಕಾಕ್
🎬 Watch Now: Feature Video
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮತದಾನ ಮಾಡಲು ಮತದಾರರು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮತದಾನ ಮಾಡಲು ಮುಂದಾಗುತ್ತಿಲ್ಲ. ಗೋಕಾಕ್ ಪಟ್ಟಣದ ಸರ್ಕಾರಿ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 100 ಹಾಗೂ 101ರಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಆಗಮಿಸುತ್ತಿಲ್ಲ. ಹೀಗಾಗಿ ಮತಗಟ್ಟೆಯಲ್ಲಿ ನೀರಸ ಮತದಾನ ಕಂಡುಬಂದಿದೆ.