ಬೆಳಗಾವಿ ಜಿಲ್ಲೆಯಲ್ಲಿ ಮಳೆಗೆ ಕೊಚ್ಚಿಹೋದ ಭತ್ತದ ಪೈರು: ರೈತರು ಕಂಗಾಲು
🎬 Watch Now: Feature Video
ಬೆಳಗಾವಿ: ಜಿಲ್ಲೆಯಾದ್ಯಂತ ರಾತ್ರಿಯಿಡೀ ಸುರಿದ ಮಹಾಮಳೆಯಿಂದ ಅನ್ನದಾತರ ಕೈ ಸೇರಬೇಕಿದ್ದ ಬಂಗಾರದಂತಹ ಭತ್ತದ ಬೆಳೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. 20 ಸಾವಿರ ಹೆಕ್ಟೇರ್ಗೂ ಅಧಿಕ ಭತ್ತದ ಫಸಲು ನೀರುಪಾಲಾಗಿದೆ. ಗದ್ದೆಯಲ್ಲಿ ಕೊಯ್ಲು ಮಾಡಿಟ್ಟಿದ್ದ ಹಾಗೂ ಕಟಾವಿಗೆ ಬಂದಿದ್ದ ಭತ್ತದ ಪೈರು ಸಂಪೂರ್ಣ ನಾಶವಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಘಸ್ಟೋಳಿ, ನಂದಗಡ ಗ್ರಾಮ ಹಾಗೂ ಬೆಳಗಾವಿ ತಾಲೂಕಿನ ಬಸ್ತವಾಡ, ಹಲಗಾ ಗ್ರಾಮದಲ್ಲಿ ಹೆಚ್ಚು ಹಾನಿಯಾಗಿದೆ. ರಾಶಿ ಮಾಡಲು ಕುಯ್ದಿಟ್ಟಿದ್ದ ಬೆಳೆ ಹಾನಿಯಾಗಿದಕ್ಕೆ ರೈತರು ದಿಕ್ಕು ತೋಚದಂತಾಗಿದ್ದಾರೆ.