ಎನ್ಎಸ್ಎಸ್ ಸ್ವಯಂಸೇವಕರಿಗೆ ಆನ್ಲೈನ್ ಮೂಲಕ ಕೋವಿಡ್ ಜಾಗೃತಿ ಕಾರ್ಯಾಗಾರ - ಕೆನರಾ ಕಾಲೇಜು
🎬 Watch Now: Feature Video
ಮಂಗಳೂರು: ನಗರದ ಕೆನರಾ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಜಂಟಿಯಾಗಿ ಎನ್ಎಸ್ಎಸ್ ಸ್ವಯಂ ಸೇವಕರಿಗೆ ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಆನ್ಲೈನ್ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಈ ಮೂಲಕ ಎನ್ಎಸ್ಎಸ್ ಸ್ವಯಂಸೇವಕರಿಗೆ ಮನೆಯಲ್ಲಿಯೇ ಇದ್ದು, ಸಾಮಾಜಿಕ ಅಂತರವನ್ನು ಉಲ್ಲಂಘನೆ ಮಾಡದೇ ವಿನೂತನವಾಗಿ ಕಾರ್ಯಾಗಾರ ನಡೆಸಲಾಯಿತು.