ಬ್ಯಾಂಕ್​ನಿಂದ ನೋಟಿಸ್: ಸಾಲಬಾಧೆ ತಾಳಲಾರದೆ ನೇಣಿಗೆ ಕೊರಳೊಡ್ಡಿದ ರೈತ - ಗದಗ ನಗರದ ಕಿಲ್ಲಾ ಓಣಿ

🎬 Watch Now: Feature Video

thumbnail

By

Published : Sep 6, 2019, 3:19 PM IST

ಸಾಲಬಾಧೆ ತಾಳಲಾರದೆ ಗದಗ ನಗರದ ಕಿಲ್ಲಾ ಓಣಿಯ‌ ನಿವಾಸಿ ಗುರುಬಸಪ್ಪ ಎಳೆಮಲಿ (55) ಎಂಬ ರೈತ ನೇಣಿಗೆ ಶರಣಾಗಿದ್ದಾನೆ. ಗುರುಬಸಪ್ಪ ಹೊಂಬಳ ಗ್ರಾಮದಲ್ಲಿ 15 ಎಕರೆ ಹೊಲ ಹೊಂದಿದ್ದು, ಕರ್ನಾಟಕ ಬ್ಯಾಂಕ್​ನಲ್ಲಿ 7 ಲಕ್ಷ ಮತ್ತು ಖಾಸಗಿ ಸಾಲ ಮಾಡಿಕೊಂಡಿದ್ದನು. ಅಲ್ಲದೇ ಕರ್ನಾಟಕ ಬ್ಯಾಂಕ್​ನಿಂದ ನೋಟಿಸ್ ಸಹ ಬಂದಿತ್ತು ಎನ್ನಲಾಗಿದೆ. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.