ಅಂಬಾರಿಯ ಮೇಲೆ ವಿಜೃಂಭಿಸಿದ ನಾಡದೇವತೆಯ ಚೆಲುವು; ಸಿರಿಸೊಬಗಿನ ನಾಡಹಬ್ಬಕ್ಕೆ ಅದ್ಧೂರಿ ತೆರೆ - ಚಿನ್ನದ ಅಂಬಾ

🎬 Watch Now: Feature Video

thumbnail

By

Published : Oct 8, 2019, 9:02 PM IST

ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜಗಾಂಭೀರ್ಯದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿರುವ ಚಿನ್ನದ ಅಂಬಾರಿ ಹೊತ್ತು ಗಜಪಡೆಯ ಕ್ಯಾಪ್ಟನ್ ಅರ್ಜುನ, ಬನ್ನಿಮಂಟಪ ತಲುಪುವ ಮೂಲಕ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ್ದಾನೆ. ಈ ಮೂಲಕ 8ನೇ ಬಾರಿ ಚಿನ್ನದ ಅಂಬಾರಿ ಹೊತ್ತ ಕೀರ್ತಿಗೂ ಅರ್ಜುನ ಪಾತ್ರನಾಗಿದ್ದಾನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಗೌರವ ವಂದನೆ ಸಲ್ಲಿಸಿ ಮಾವುತ ವಿನು ಹೇಳಿದಂತೆ ನಿಧಾನವಾಗಿ ರಾಜಗಾಂಭೀರ್ಯದಂತೆ ಹೆಜ್ಜೆ ಹಾಕಿದ ಅರ್ಜುನ, 1 ಗಂಟೆ 55 ನಿಮಿಷದಲ್ಲಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿದ್ದಾನೆ. ಈ ಮೂಲಕ ಜಂಬೂಸವಾರಿ ಸಂಪನ್ನಗೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.