ದಿ.ಸುರೇಶ ಅಂಗಡಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಪಕ್ಷಕ್ಕೆ ಬಲ : ಸಚಿವ ಜಗದೀಶ್ ಶೆಟ್ಟರ್ - Belgavi By- election
🎬 Watch Now: Feature Video
ಬೆಳಗಾವಿ : ಪ್ರತಿ ತಾಲೂಕಿನಲ್ಲಿ ಪಕ್ಷದ ಸಂಘಟಿತ ಕಾರ್ಯಕರ್ತರ ದೊಡ್ಡ ಪಡೆ ಹಾಗೂ ದಿ.ಸುರೇಶ ಅಂಗಡಿ ಅವರ ಅಭಿವೃದ್ಧಿ ಕಾರ್ಯಗಳು ನಮ್ಮ ಪಕ್ಷಕ್ಕೆ ಬಲ ತಂದುಕೊಡಲಿವೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರು ಕಾರ್ಯಕರ್ತರು, ಮತದಾರರನ್ನು ಭೇಟಿ ಮಾಡುತ್ತಿದ್ದಾರೆ. ಮನೆ ಮನೆ ಕ್ಯಾಂಪೇನ್ ಮಾಡಲಾಗುತ್ತಿದೆ. ಇಂದು ನಾನು ಕೂಡ ಧಾರ್ಮಿಕ ಕೇಂದ್ರಗಳ ಗುರುಗಳನ್ನು, ಬೆಳಗಾವಿ ವಕೀಲರ ಸಂಘದ ಎಲ್ಲ ಸದಸ್ಯರನ್ನು ಭೇಟಿ ಮಾಡಿ ಮಂಗಳಾ ಅಂಗಡಿ ಪರ ಇರುವಂತೆ ಕೇಳುತ್ತೇವೆ ಎಂದರು.