ಲಾಕ್ಡೌನ್ ನಿಯಮ ಗಾಳಿಗೆ ತೂರಿ ಸಂತೆ ನಡೆಸಿದ ಜನ: ಜಿಲ್ಲಾಡಳಿತ ಮಾಡ್ತಿರೋದು ಏನು? - ಕೊರೊನಾ ವೈರಸ್
🎬 Watch Now: Feature Video
ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದರೂ ಜನರು ಮಾತ್ರ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಬೇಜವಾಬ್ದಾರಿತನದ ವರ್ತನೆ ತೋರುತ್ತಿದ್ದಾರೆ. ಅಲ್ಲದೇ ಜಂಬಗಿ ಗ್ರಾಮದಲ್ಲಿ ಪೊಲೀಸರ ಎದುರಿಗೇ ಸಂತೆ ನಡೆಸುವ ಮೂಲಕ ಜನ ಸಂದಣಿ ಸೇರಿ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಜಿಲ್ಲಾಡಳಿತದ ನಿಯಮ ಮೀರಿ ಸಂತೆಯಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪಾಲ್ಗೊಂಡಿದ್ದು, ಆಡಳಿತಾಧಿಕಾರಿಗಳ ಸಡಿಲಿಕೆಯನ್ನು ತೋರಿಸುತ್ತಿದೆ.