‘ಬದುಕಿನ ನೆಮ್ಮದಿ ಹಾರಿಹೋಯ್ತು ದೇವರೇ’... ಹಾಡಿನ ಮೂಲಕ ಮಳೆಯ ರೌದ್ರನರ್ತನ ಬಿಚ್ಚಿಟ್ಟ ನಿರ್ವಾಹಕ..: ವಿಡಿಯೋ! - karnataka flood
🎬 Watch Now: Feature Video
ಮುಕ್ಕಾಲು ಕರ್ನಾಟಕ ಮುಳುಗಿ ಹೋಯ್ತ್ ದೇವರೆ, ಬದುಕಿನ ನೆಮ್ಮದಿ ಹಾರಿಹೋಯ್ತ್ ದೇವರೇ ಎನ್ನುವ ಹಾಡನ್ನು ರಚನೆ ಮಾಡಿ ಪ್ರವಾಹದ ಪರಿಸ್ಥಿತಿಯಲ್ಲಿನ ಜನರ ನೋವನ್ನು ಹಾಡಿನ ಮೂಲಕ ಹಾಡಿದ್ದಾರೆ ಬಿಎಂಟಿಸಿ ನಿರ್ವಾಹಕ ಅಬು ಬಾಕರ್ ಸಿದ್ದಿಕ್. ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನವಾರಾಗಿದ್ದು, ಹವ್ಯಾಸವಾಗಿ ಅನೇಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಭಾವಗೀತೆಗಳು, ಭಕ್ತಿ ಗೀತೆಗಳನ್ನು ಹಾಡುತ್ತಾರೆ. ಪ್ರಸ್ತುತ ಬೆಂಗಳೂರಿನ ಶಾಂತಿನಗರ ಡಿಪೋದಲ್ಲಿ ಬಿಎಂಟಿಸಿ ಯ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ ಇವರು. ನೀವು ಕೇಳಿ ಕರ್ನಾಟಕದ ಈ ಕಣ್ಣೀರ ಕಥೆಯನ್ನ..
Last Updated : Aug 10, 2019, 9:51 PM IST