ದೀಪ ಬೆಳಗಿ ಕೊರೊನಾದಿಂದ ಪಾರಾಗೋಣ.. ಹುಬ್ಬಳ್ಳಿಯ ಮೂರುಸಾವಿರಮಠ ಶ್ರೀಗಳ ಕರೆ - Hubli Corona news
🎬 Watch Now: Feature Video
ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ನಾವೆಲ್ಲ ದೀಪ ಬೆಳಗಿಸುವ ಮೂಲಕ ದೈವ ಶಕ್ತಿಗೆ ನಮಿಸೋಣ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಹೇಳಿದರು. ಜ್ಯೋತಿ ಅಂದರೆ ಬೆಳಕು, ನಾವೆಲ್ಲ ಬೆಳಕಿನಲ್ಲಿರಲು ಬಯಸುತ್ತೇವೆ. ಬೆಳಕಿದ್ರೆ ಜೀವನವೆಲ್ಲ ಆನಂದಮಯ. ಕೊರೊನಾದಿಂದ ಪಾರಾಗಲು ಪ್ರಧಾನಿ ಮೋದಿಯವರು ಭಗವಂತನನ್ನು ಜ್ಞಾನಿಸಲು ಆಹ್ವಾನಿಸಿದ್ದಾರೆ. ನಾವೆಲ್ಲರೂ ದೀಪವನ್ನು ಬೆಳಗಿ ದೈವ ಶಕ್ತಿಗೆ ನಮಿಸುವ ಮೂಲಕ ಕೊರೊನಾದಿಂದ ಪಾರಾಗೋಣ ಎಂದರು.