21 ಬಾರಿ ಸಿಡಿದ ಕುಶಾಲತೋಪು... ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಚಾಲನೆ - 21 ಬಾರಿ ಸಿಡಿದ ಕುಶಾಲತೋಪು, ದಸರಾ ವಿಜಯೋತ್ಸವಕ್ಕೆ ಚಾಲನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9317625-684-9317625-1603710342064.jpg)
ಮೈಸೂರು: ಜಂಬೂಸವಾರಿ ಆರಂಭಕ್ಕೆ ವಿಜಯೋತ್ಸವ ಸಂಕೇತ ಸಾರುವ 21 ಕುಶಾಲ ತೋಪುಗಳನ್ನು ಸಿಡಿಸಲಾಯಿತು. ಕೋಟೆ ಮಾರಮ್ಮನ ದೇವಸ್ಥಾನದ ಮುಂಭಾಗ 7 ಫಿರಂಗಿಗಳ ಮೂಲಕ ಮೂರು ಸುತ್ತಿನಲ್ಲಿ 21 ಕುಶಾಲ ತೋಪುಗಳನ್ನು ಸಿಎಆರ್ ಸಿಬ್ಬಂದಿಗಳು ಸಿಡಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಅಧಿಕೃತ ಸಂದೇಶ ರವಾನಿಸಿದರು. ಕುಶಾಲತೋಪು ಸಿಡಿಸಿದ ನಂತರ ಚಿನ್ನದ ಅಂಬಾರಿ ಹೊತ್ತು ಬರುವ ಕ್ಯಾಪ್ಟನ್ ಅಭಿಮನ್ಯುಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.