ಈ ಬಾರಿಯ ಬಜೆಟ್​ನಲ್ಲಾದರೂ ಚಿತ್ರರಂಗದ ಚಿತ್ರನಗರಿ ಕನಸು ನನಸಾಗುತ್ತಾ? - ಬಜೆಟ್ 2020 ಕರ್ನಾಟಕ

🎬 Watch Now: Feature Video

thumbnail

By

Published : Mar 4, 2020, 11:55 PM IST

ಬೆಂಗಳೂರು: ನಾಳೆ 2020ನೇ ಸಾಲಿನ ರಾಜ್ಯ ಬಜೆಟ್​ನ್ನು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮಂಡಿಸಲಿದ್ದಾರೆ. ಇನ್ನು ಈ ಬಜೆಟ್ ಮೇಲೆ ಕನ್ನಡ ಚಿತ್ರರಂಗ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಕರ್ನಾಟಕ ಚನಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಅರ್.ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ. ಕನ್ನಡ ಚಿತ್ರರಂಗದ ಬಹು ದಿನದ ಬೇಡಿಕೆಯಾದ ಚಿತ್ರನಗರಿ ಏಕ ಗವಾಕ್ಷಿ ಪದ್ಧತಿ ಹಾಗೂ ಜಿಎಸ್​ಟಿ ಹಣ ನಿರ್ಮಾಪಕರಿಗೆ ನೇರವಾಗಿ ಜಮಾವಣೆ ಆಗಬೇಕು ಎಂಬುದು ನಮ್ಮ ಬೇಡಿಕೆ. ಅಲ್ಲದೆ ಫಿಲ್ಮ್ ಚೇಂಬರ್ 75 ವಸಂತಗಳನ್ನು ಪೂರೈಸಿದ್ದು, ಅದ್ಧೂರಿ ಕಾರ್ಯಕ್ರಮ ಮಾಡಲು ಚೇಂಬರ್ ತೀರ್ಮಾನಿಸಿದೆ. ಇದಕ್ಕಾಗಿ ಸರ್ಕಾರದ ನೆರವು ಕೇಳಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ ಈ ಬಜೆಟ್​ನಲ್ಲಿ ಚಿತ್ರರಂಗದ ಬೆಳವಣಿಗೆಗೆ ಪೂಕರವಾದ ಅನುದಾನವನ್ನು ಮುಖ್ಯಮಂತ್ರಿಗಳು ನೀಡುವ ಭರವಸೆ ನಮಗೆ ಇದೆ. ಅದಕ್ಕಾಗಿ ನಾಳೆಯ ಬಜೆಟ್ ಮೇಲೆ ಚಿತ್ರರಂಗದ ನಿರೀಕ್ಷೆ ಹೆಚ್ಚಾಗಿದೆ ಎಂದು ಅವರು ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.