ಧಾರವಾಡದಲ್ಲಿ 'ವಿಶ್ವ ವಿಶೇಷ ಚೇತನ'ರ ದಿನಾಚರಣೆ - International Day of Persons with Disabilities in Dharwad
🎬 Watch Now: Feature Video
ಧಾರವಾಡ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹೊನ್ನಮ್ಮ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ವಿಶ್ವ ವಿಶೇಷಚೇತನರ ದಿನಾಚರಣೆ ನಿಮಿತ್ತ ವಿಕಲಚೇತನರ ಕಾನೂನು ಸಾಕ್ಷರತೆ ಹಾಗೂ ಕಿವುಡ ಮಕ್ಕಳಿಗೆ ಸಿಹಿ ವಿತರಣೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಆರ್.ಎಸ್.ಚಿಣ್ಣನ್ನವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಳಿಕ ವಿಕಲಚೇತನ ಮಕ್ಕಳಿಗೆ ಸಿಹಿ ಹಂಚಿದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಘೋಡಸೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಮ್.ಅಮರನಾಥ, ವಾರ್ತಾ ಸಹಾಯಕಾಧಿಕಾರಿ ಡಾ.ಎಸ್.ಎಮ್.ಹಿರೇಮಠ, ಹಿರಿಯ ನ್ಯಾಯವಾದಿ ವೈ.ಎನ್.ಮದ್ನೂರ, ಜಿಲ್ಲಾ ನಿವೃತ್ತ ಶಸ್ತ್ರ ಚಿಕಿತ್ಸಕ ಡಾ.ವಿ.ಡಿ.ಕರ್ಪೂರಮಠ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.