ಮಾವಿನ ತೋಟದಲ್ಲಿ ಮುದ್ದಾದ ಮಗುವನ್ನು ಬಿಟ್ಟು ಹೋದ ಹೆತ್ತವರು! - ಕೋಲಾರದಲ್ಲಿ ನವಜಾತು ಶಿಶು ರಕ್ಷಣೆ,
🎬 Watch Now: Feature Video
ಮಾವಿನ ತೋಟದಲ್ಲಿ ನವಜಾತ ಶಿಶುವೊಂದನ್ನು ಹೆತ್ತವರು ಬಿಟ್ಟು ಹೋಗಿರುವ ಘಟನೆ ಕೋಲಾರ ತಾಲೂಕಿನ ಆಲೇರಿ ಗ್ರಾಮದ ಬಳಿ ನಡೆದಿದೆ. ಒಂದು ದಿನದ ನವಜಾತ ಹೆಣ್ಣುಮಗುವೊಂದನ್ನು ಆಲೇರಿ ಗ್ರಾಮದ ಬಳಿಯ ಮಾವಿನ ತೋಪಿನಲ್ಲಿಟ್ಟು ಪೋಷಕರು ಹೋಗಿದ್ದಾರೆ. ಮಗುವಿನ ಅಳುವಿನ ಧ್ವನಿಯಿಂದ ಸ್ಥಳೀಯರೊಬ್ಬರಿಗೆ ಗಮನಕ್ಕೆ ಬಂದಿದೆ. ಕೂಡಲೇ ಮಗುವನ್ನು ರಕ್ಷಣೆ ಮಾಡಿ ಸುಗಟೂರು ಆರೋಗ್ಯ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಸುಗಟೂರು ಆರೋಗ್ಯ ಕೇಂದ್ರದ ವೈದ್ಯೆ ಕಾವ್ಯ ಮಗುವಿಗೆ ಆರೈಕೆ ಮಾಡಿದರು. ಇನ್ನು ಮುದ್ದಾದ ಮಗುವನ್ನು ಬಿಟ್ಟು ಹೋಗಿರುವ ಪೋಷಕರಿಗೆ ಸ್ಥಳೀಯರು ಹಿಡಿಶಾಪ ಹಾಕಿದ್ರು.