ಹುಲಗಿಯಲ್ಲಿ ಮಾರ್ದನಿಸಿದ ಉಧೋ ಉಧೋ ಹುಲಿಗೆಮ್ಮ... ಅದ್ಧೂರಿಯಾಗಿ ನಡೆದ ಶ್ರೀ ಹುಲಿಗೆಮ್ಮದೇವಿ ರಥೋತ್ಸವ - kannada news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3408748-thumbnail-3x2-hulagi.jpg)
ಕೊಪ್ಪಳ : ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿದೇವತೆಗಳ ದೇವಸ್ಥಾನಗಳಲ್ಲೊಂದಾಗಿರುವ ಕೊಪ್ಪಳ ತಾಲೂಕಿನ ಹುಲಗಿಯ ಶ್ರೀ ಹುಲಿಗೆಮ್ಮದೇವಿ ರಥೋತ್ಸವ ಇಂದು ಸಂಜೆ ಅದ್ಧೂರಿಯಾಗಿ ನಡೆಯಿತು. ಲಕ್ಷಾಂತರ ಭಕ್ತರ ಉಧೋ ಉಧೋ ಎಂಬ ಘೋಷಣೆಗಳೊಂದಿಗೆ ರಥೋತ್ಸವ ವೈಭವಯುತವಾಗಿ ನಡೆಯಿತು. ರಥಕ್ಕೆ ಉತ್ತುತ್ತಿ, ಬಾಳೆ ಹಣ್ಣು ಎಸೆದು ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಕೃತಾರ್ಥರಾದರು.
Last Updated : May 28, 2019, 9:42 PM IST