ಗದಗದಲ್ಲಿ ಮಳೆರಾಯನ ಅವಾಂತರ.. ಆತಂಕದಲ್ಲಿ 50ಕ್ಕೂ ಹೆಚ್ಚು ಕುಟುಂಬ! - Gadag People in trouble as Raja Kaluve fills
🎬 Watch Now: Feature Video
ಗದಗ: ಕೂಲಿ ಮಾಡಿ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದ ಬಡ ಕುಟುಂಬಗಳ ಬಡಾವಣೆಗಳಿಗೆ ಬೆಳ್ಳಂಬೆಳಗ್ಗೆ ಮಳೆರಾಯ ತೊಂದರೆ ಕೊಟ್ಟಿದ್ದಾನೆ. ಮಳೆ ನೀರಿನ ಜತೆಗೆ ಚರಂಡಿ ನೀರೂ ಸೇರಿ ಮನೆಯೊಳಗೆ ನುಗ್ಗಿದೆ.ಗೃಹೋಪಯೋಗಿ ವಸ್ತುಗಳು ಸೇರಿ ಕೂಡಿಟ್ಟ ದವಸ ಧಾನ್ಯಗಳೆಲ್ಲಾ ನಾಶವಾಗಿವೆ. ಇನ್ನೊಂದೆಡೆ, ರಾಜಕಾಲುವೆ ತುಂಬಿ ಹರಿಯುತ್ತಿದ್ದು, 50ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲಿ ಕಾಲ ಕಳೆಯುತ್ತಿವೆ.