ಭಾರಿ ಮಳೆಗೆ ನೀರಲ್ಲಿ ಕೊಚ್ಚಿಹೋದ ಬೆಳೆಗಳು! - ಧಾರವಾಡ ಜಿಲ್ಲೆಯಾದ್ಯಂತ ಭಾರೀ ಮಳೆ
🎬 Watch Now: Feature Video
ಹುಬ್ಬಳ್ಳಿ: ಧಾರವಾಡ ಜಿಲ್ಲಾದ್ಯಂತ ಭಾರಿ ಮಳೆ ಸುರಿದಿದ್ದು, ಅತಿಯಾದ ಮಳೆಯಿಂದಾಗಿ ಹೊಲಕ್ಕೆ ನೀರು ನುಗ್ಗಿ ಬೆಳೆಗಳೆಲ್ಲ ನೀರಲ್ಲಿ ಕೊಚ್ಚಿ ಹೋದ ಘಟನೆ ಕುಂದಗೋಳ ತಾಲೂಕಿನಲ್ಲಿ ನಡೆದಿದೆ. ಗುಡೇನಕಟ್ಟಿ, ಮುಳೋಳ್ಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ರಸ್ತೆ ಇಲ್ಲದ ಕಾರಣ ಎಲ್ಲ ನೀರು ಹೊಲಗಳಿಗೆ ಹರಿದು ರೈತರ ಬೆಳೆ ಹಾಳು ಮಾಡಿದೆ. ಪರಿಣಾಮ ಕೂಡಲೇ ಸೇತುವೆ ಕಾರ್ಯ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.