ನರಗುಂದ ಜನತೆಗೆ ಯಕ್ಷ ಪ್ರಶ್ನೆಯಾದ ಭೂ ಕುಸಿತ: ವಿಜ್ಞಾನಿಗಳಿಗೂ ಸಿಕ್ಕಿಲ್ಲ ನಿಖರ ಕಾರಣ! - ನರಗುಂದ ಪಟ್ಟಣದಲ್ಲಿ ಭೂ ಕುಸಿತ
🎬 Watch Now: Feature Video
ನರಗುಂದ ಪಟ್ಟಣದ ಜನರಿಗೆ ಭೂಕುಸಿತದ ಭೂತ ಬೆಂಬಿಡದೆ ಕಾಡುತ್ತಿದೆ. ಭೂ ಕುಸಿತಕ್ಕೆ ಜನರು ಬೆಚ್ಚಿಬಿದ್ದಿದ್ದು ಪ್ರತಿಕ್ಷಣವೂ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಈಗಾಗಲೇ ಏಳು ಮಂದಿ ಭೂಕುಸಿತದ ವೇಳೆ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಕೆಲ ಮನೆಗಳಿಗೂ ಇದರಿಂದ ಹಾನಿಯಾಗಿದ್ದು ಮುಂದೇನು ಅನ್ನೋ ಭಯ ಬಂಡಾಯದ ನೆಲದ ಜನರನ್ನು ಕಾಡುತ್ತಿದೆ.