ನಾನು ಬಿಎಸ್ವೈ ಅನುಯಾಯಿ, ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ: ಬಾಬುರಾವ್ ಚಿಂಚನಸೂರ್ - ಬಾಬುರಾವ್ ಚಿಂಚನಸೂರ್ ಹೇಳಿಕೆ
🎬 Watch Now: Feature Video
ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮತ್ತೆ ಬಿಎಸ್ವೈ ಪರ ಬ್ಯಾಟ್ ಬೀಸಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ನಾನು ಬಿಜೆಪಿ ಪಕ್ಷ ಸೇರಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ನಾನು ಬಿಎಸ್ವೈ ಅವರ ಅನುಯಾಯಿ. ಯಡಿಯೂರಪ್ಪ ನಮ್ಮ ಹಾಗೂ ದೇವರು. ನಾನು ಗೆದ್ದಿದ್ದರೆ ಮಂತ್ರಿಯಾಗುತ್ತಿದ್ದೆ, ಸೋತಿದ್ದರೂ ಕೂಡ ಕರೆದು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರು ನಮ್ಮ ಎಲ್ಲಾ ನಾಯಕರ ಸಾಧಕ - ಬಾಧಕವನ್ನ ತಿಳಿದುಕೊಂಡು ಮಂತ್ರಿಮಂಡಲ ವಿಸ್ತರಣೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಕೋಲಿ ಸಮಾಜಕ್ಕೆ ಆದ್ಯತೆ ಸಿಗಲಿದೆ ಎಂದು ಸಿಎಂ ಅವರನ್ನು ಹಾಡಿ ಹೊಗಳಿದ್ದಾರೆ.