ಕಾರಿನ ಗ್ಲಾಸ್ ಪೀಸ್ ಪೀಸ್... ಮಡಿಕೇರಿಯಲ್ಲಿ 'ಹುಚ್ಚ ವೆಂಕಟ್' ಹುಚ್ಚಾಟ... ರೊಚ್ಚಿಗೆದ್ದ ಸ್ಥಳೀಯರಿಂದ ಗೂಸಾ! - ಮಡಿಕೇರಿಯಲ್ಲಿ ವೆಂಕಟ್ ಹುಚ್ಚಾಟ
🎬 Watch Now: Feature Video
ಮಡಿಕೇರಿ: ಚನ್ನೈ ಹಾಗೂ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ವಿಚಿತ್ರ ವೇಷದಲ್ಲಿ ಬೀದಿ ಬೀದಿ ಅಲೆಯುತ್ತಾ ಕಾಣಿಸಿಕೊಂಡಿದ್ದ ನಟ ಹುಚ್ಚ ವೆಂಕಟ್ ಇದೀಗ ಮಡಿಕೇರಿಯಲ್ಲಿ ದೊಡ್ಡ ರಾದ್ಧಾಂತ ಮಾಡಿದ್ದಾರೆ. ನಗರದಲ್ಲಿ ಕಾರೊಂದರ ಗಾಜು ಒಡೆದು ಪುಡಿ ಪುಡಿ ಮಾಡಿದ್ದಾರೆ. ಈ ರೀತಿ ವಿಚಿತ್ರವಾಗಿ ವರ್ತಿಸಿದ ಕಾರಣಕ್ಕೆ ಕುಪಿತಗೊಂಡ ಜನ ಹುಚ್ಚ ವೆಂಕಟ್‌ಗೆ ಗೂಸಾ ನೀಡಿದ್ದಾರೆ. ಹುಚ್ಚಾಟ ಮಿತಿ ಮೀರಿದಾಗ ಪೊಲೀಸರು ಸ್ಥಳಕ್ಕೆ ಬಂದು ವೆಂಕಟ್‌ನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಕಾರು ಪುಡಿಪುಡಿ ಮಾಡಲು ಕಾರಣ ಏನು ಅಂತಾ ತಿಳಿದು ಬಂದಿಲ್ಲ.
Last Updated : Aug 29, 2019, 7:01 PM IST