ವಿದ್ಯುತ್ ತಂತಿ ಸ್ಪರ್ಶಿಸಿ ಬಿಳಿ ಜೋಳದ ಮೇವು ಸುಟ್ಟು ಭಸ್ಮ - ಹುಬ್ಬಳ್ಳಿ ಇತ್ತೀಚಿನ ಸುದ್ದಿ
🎬 Watch Now: Feature Video
ಹುಬ್ಬಳ್ಳಿ: ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಬರುತ್ತಿದ್ದ ಬಿಳಿ ಜೋಳದ ಮೇವಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಸಂಪೂರ್ಣ ಮೇವು ಸುಟ್ಟು ಹೋದ ಘಟನೆ ಕುಂದಗೋಳ ತಾಲೂಕಿನ ಕಳಸ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಕಳಸ ಗ್ರಾಮದ ಶಿವಾನಂದ ನೀಲಕಂಠಪ್ಪ ಕಮತದ ಎಂಬವರು ಹೊಲದಲ್ಲಿ ಬೆಳೆದ ಬಿಳಿ ಜೋಳದ ಮೇವನ್ನು ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಬರುತ್ತಿದ್ದರು. ಕಳಸ ಗ್ರಾಮದ ಪಂಚಾಯಿತಿ ಎದುರು ಬರುತ್ತಿರುವಾಗ ವಿದ್ಯುತ್ ತಂತಿ ಸ್ಪರ್ಶಿಸಿದೆ. ತಕ್ಷಣ ಸ್ಥಳೀಯರು ವಿದ್ಯುತ್ ಸ್ಥಗಿತಗೊಳಿಸಿ, ನೀರಿನ ಟ್ಯಾಂಕರ್ ತರಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಳಸ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗುಡಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.