ಚಲಿಸುತ್ತಿದ್ದ ವ್ಯಾನ್ಗೆ ಆಕಸ್ಮಿಕ ಬೆಂಕಿ: ಚಾಲಕ ಪ್ರಾಣಾಪಾಯದಿಂದ ಪಾರು - ಮಾರುತಿ ವ್ಯಾನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8945197-thumbnail-3x2-vis.jpg)
ತುಮಕೂರು: ಚಲಿಸುತ್ತಿದ್ದ ಮಾರುತಿ ವ್ಯಾನ್ನಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದ ಘಟನೆ ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ನಡೆದಿದೆ. ಮಾರುತಿ ವ್ಯಾನ್ ಚಾಲನೆ ಮಾಡುತ್ತಿದ್ದ ಖಾಲೀದ್ ಎಂಬುವರು ತಕ್ಷಣ ಕೆಳಗಿಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.