ಶಶಿಕಲಾಗೆ ತೀವ್ರ ಜ್ವರ ಹಿನ್ನೆಲೆ ಬೋರಿಂಗ್ ಆಸ್ಪತ್ರೆಗೆ ದಾಖಲು - fever for Sasikala Natarajan Hospitalization
🎬 Watch Now: Feature Video
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ಗೆ ತೀವ್ರ ಜ್ವರ ಹಿನ್ನೆಲೆ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿಯಿಂದ ಶಶಿಕಲಾರಿಗೆ ಜ್ವರ ಕಾಣಿಸಿಕೊಂಡಿದ್ದು, ಜೈಲಿನ ವೈದ್ಯರ ತಂಡ ತಪಾಸಣೆ ನಡೆಸಿ ಜ್ವರದ ತೀವ್ರತೆ ಪರಿಗಣಿಸಿ ಇಂದು ಬೋರಿಂಗ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಸತತ ಎರಡು ಗಂಟೆ ತಪಾಸಣೆ ಬಳಿಕ ಸ್ಪೆಷಲ್ ವಾರ್ಡ್ಗೆ ದಾಖಲಿಸುವ ಮೂಲಕ ಶಶಿಕಲಾರ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
TAGGED:
anekal latest news