ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣು - ರೈತ ಆತ್ಮಹತ್ಯೆಗೆ ಶರಣು
🎬 Watch Now: Feature Video
ಬೆಳಗಾವಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೃಷಿಯಲ್ಲಿ ತೀವ್ರ ನಷ್ಟ ಅನುಭವಿಸಿದ ರೈತನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ತಾಲೂಕಿನ ಕೇದನೂರಿನಲ್ಲಿ ನಡೆದಿದೆ. ಕೇದೂರಿನ ಅಪ್ಪಯ್ಯ ನಾಗಪ್ಪ ರಾಜಾಯಿ ( 65 ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸಾಕಷ್ಟು ಸಾಲ ಮಾಡಿಕೊಂಡು ತರಕಾರಿ ಬೆಳೆ ಬೆಳೆದಿದ್ದ. ಆದರೆ, ಬೆಳೆದ ಬೆಳೆ ಕೈಹಿಡಿಯಲಿಲ್ಲ. ಆರ್ಥಿಕವಾಗಿ ಕುಸಿದಿದ್ದ ಈತ ಮಾನಸಿಕ ಖಿನ್ನತೆಗೂ ಒಳಗಾಗಿದ್ದ ಎನ್ನಲಾಗಿದೆ. ಈ ಎಲ್ಲ ಸಮಸ್ಯೆಗಳಿಂದ ಬೇಸತ್ತ ರೈತ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.