ಯುವಕರಿಗೆ ಸೇನೆ ಸೇರುವ ಹಂಬಲ: ಉಚಿತ ತರಬೇತಿ ನೀಡುವ ಮೂಲಕ ಮಾಜಿ ಯೋಧರ ಬೆಂಬಲ - ಯುವಕರಿಗೆ ಸೇನೆ ಸೇರಲು ತರಬೇತಿ
🎬 Watch Now: Feature Video
ಹಲವಾರು ಯುವಕರಿಗೆ ಸೈನ್ಯಕ್ಕೆ ಸೇರುವ ಹಂಬಲ ಇರುತ್ತೆ. ಆದರೆ ಕೆಲವರಿಗೆ ದೈಹಿಕ ಸಾಮರ್ಥ್ಯ ಇರುವುದಿಲ್ಲ. ದೈಹಿಕ ಸಾಮರ್ಥ್ಯ ಇದ್ದವರಿಗೆ ಪರೀಕ್ಷೆಯ ಭಯ ಕಾಡುತ್ತೆ. ಇಂತಹ ಯುವಕರ ನೆರವಿಗೆ ಬಂದಿದ್ದಾರೆ ಹಾವೇರಿ ತಾಲೂಕು ಅಗಡಿ ಗ್ರಾಮದ ಮಾಜಿ ಯೋಧರು. ಯುವಕರಿಗಾಗಿ ಸಂಸ್ಥೆಯೊಂದನ್ನ ತೆರೆದು ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಮಾಡುತ್ತಿದ್ದಾರೆ. ಉಚಿತವಾಗಿ ಮಾಡುತ್ತಿರುವ ಮಾಜಿ ಯೋಧರ ಈ ಕಾರ್ಯಕ್ಕೆ ಗ್ರಾಮಸ್ಥರೂ ಕೈಜೋಡಿಸಿದ್ದಾರೆ.