ಹಾನಗಲ್ನಲ್ಲಿ ಗಜಪಡೆ ದಾಳಿಗೆ ನೆಲಕಚ್ಚಿದ ಬೆಳೆ... ಎದ್ದುಬಿದ್ದು ಆನೆಗಳನ್ನು ಓಡಿಸಲು ಯತ್ನಿಸಿದ ಜನ! - ನೆಲ ಕಚ್ಚಿದ ಬೆಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4919850-thumbnail-3x2-elephants.jpg)
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಹಲವು ಗ್ರಾಮಗಳ ರೈತರಿಗೆ ಇದೀಗ ಆನೆಗಳ ಕಾಟ ಶುರುವಾಗಿದ್ದು, ತಾಲೂಕಿನ ತಿಳುವಳ್ಳಿ, ಕಾಮನಹಳ್ಳಿ, ಕರೇಕ್ಯಾತನಹಳ್ಳಿ, ಮಕರವಳ್ಳಿ, ಹೊಂಕಣ ಮತ್ತು ಶಿವಪುರ ಗ್ರಾಮಗಳ ರೈತರ ಬೆಳೆಗಳಿಗೆ ಹಿಂಡು-ಹಿಂಡಾಗಿ ಆನೆಗಳು ದಾಳಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಭತ್ತ, ಮೆಕ್ಕೆಜೋಳ, ಬಾಳೆ ಸೇರಿದಂತೆ ವಿವಿಧ ಬೆಳೆಗಳು ನೆಲಕಚ್ಚಿವೆ. ಕಂಗಾಲಾಗಿರುವ ರೈತರು ಅರಣ್ಯಾಧಿಕಾರಿಗಳ ಜೊತೆ ಸೇರಿ ಅವುಗಳನ್ನು ಓಡಿಸಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ.
Last Updated : Oct 31, 2019, 7:27 PM IST