ವಿಡಿಯೋ: ಹೋಂ ಐಸೋಲೇಶನ್ ಹೇಗಿರಬೇಕು? ತಜ್ಞ ವೈದ್ಯರಿಂದ ಮಾಹಿತಿ - ಡಾ.ರಾಮಚಂದ್ರ ರಾಯಚೂರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8368236-thumbnail-3x2-jaydjpg.jpg)
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ಗಳ ಸಮಸ್ಯೆಯೂ ಶುರುವಾಗಿದೆ. ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೋವಿಡ್ ಪಾಸಿಟಿವ್ ಬಂದಿರುವವರ ಸಂಖ್ಯೆ ಲಕ್ಷಕ್ಕೂ ಅಧಿಕವಿದೆ. ಆದ್ದರಿಂದ ಈಗ ಕೋವಿಡ್ ಲಕ್ಷಣಗಳಿಲ್ಲದ ಸೋಂಕಿತರು ಆಸ್ಪತ್ರೆಗೆ ಹೋಗಬೇಕಿಲ್ಲ. ಹೋಂ ಐಸೋಲೇಶನ್ ಮೂಲಕವೇ ಸೋಂಕಿನಿಂದ ಮುಕ್ತಿ ಹೊಂದಬಹುದು. ಹೀಗಾಗಿ ಸೋಂಕಿತರು ಹೋಂ ಐಸೋಲೇಶನ್ ವೇಳೆ ಯಾವೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು? ಮನೆಯಲ್ಲಿ ಯಾವೆಲ್ಲ ವೈದ್ಯಕೀಯ ಸಾಮಗ್ರಿಗಳಿರಬೇಕು? ಆಹಾರ ಪದ್ಧತಿ ಹೇಗಿರಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಬೆಳಗಾವಿಯ ಯುಎಸ್ಎಂ ಕೆಎಲ್ಇ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಡಾ.ರಾಮಚಂದ್ರ ರಾಯಚೂರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಅವರೊಂದಿಗಿನ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ.