ಮನೆ, ದೇವಸ್ಥಾನಗಳ ಒಳ ಆವರಣಕ್ಕೆ ಸೀಮಿತವಾದ ದಸರಾ ಆಚರಣೆ - ದಸರಾ ಆಚರಣೆ
🎬 Watch Now: Feature Video
ಲಿಂಗಸುಗೂರು: ಈ ಬಾರಿ ದಸರಾ ಹಬ್ಬದ ಸಂಪ್ರದಾಯಗಳು ಮನೆ, ಮಠ, ದೇವಸ್ಥಾನಗಳ ಒಳ ಆವರಣಕ್ಕೆ ಮಾತ್ರ ಸೀಮಿತಗೊಂಡಿವೆ. ಭಾವೈಕ್ಯತೆ ಸಂಕೇತವಾಗಿ ಆಚರಿಸಲ್ಪಡುವ ದಸರಾ ಹಿಂದೂಗಳ ಹಬ್ಬವೆಂದು ಗುರುತಿಸಿಕೊಂಡಿದ್ದರೂ ಈ ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾಗಿ ಭಾಗವಹಿಸುತ್ತಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ದೇವರಭೂಪುರದ ಬೃಹನ್ಮಠ, ಕೋಠಾದ ಅನ್ನಪೂರ್ಣೇಶ್ವರಿ, ಯರಡೋಣ ಗುರುಮಠ, ಲಿಂಗಸುಗೂರು ಶಾಂಭವಿಮಠ, ಅಂಕಲಿಮಠ, ಮುದಗಲ್ಲ ಸಾಲಿಮಠ ಸೇರಿದಂತೆ ದೇವಸ್ಥಾನಗಳಲ್ಲಿ ಬಹಿರಂಗ ಪುರಾಣ, ಪ್ರವಚನಗಳಿಗೆ ಕಡಿವಾಣ ಹಾಕಲಾಗಿದೆ. ಕೋವಿಡ್ ನಿಯಮಗಳ ಪಾಲನೆ ನಿಮಿತ್ತ ಶರನ್ನವರಾತ್ರಿ ಸಾಂಪ್ರದಾಯಿಕ ಆಚರಣೆಗಳು ಹೆಚ್ಚಾಗಿ ಮನೆಗಳಲ್ಲಿ ಆಚರಿಸಲಾಗುತ್ತಿದೆ. ಮಠಗಳಲ್ಲಿ ಬೆರಳೆಣಿಕೆ ಭಕ್ತರು ಮಾತ್ರ ಸೇರಿ ಹೋಮ ಹವನ ನಡೆಸುತ್ತಿದ್ದಾರೆ.