ಕೊರೊನಾ ಭೀತಿ: ಶ್ರೀಕೃಷ್ಣ-ಬಲರಾಮ ರಥಯಾತ್ರೆ ಮುಂದೂಡಿಕೆ - ಕೊರೋನಾ ವೈರಸ್ ಭೀತಿ
🎬 Watch Now: Feature Video
ಮಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಸ್ಕಾನ್ ಶ್ರೀಕೃಷ್ಣ-ಬಲರಾಮ ರಥಯಾತ್ರೆ ಮುಂದೂಡಿಕೆ ಮಾಡಲಾಗಿದೆ ಎಂದು ಇಸ್ಕಾನ್ ಕಾರ್ಯದರ್ಶಿ ಸನಂದನ ದಾಸ್ ಹೇಳಿದರು. ಮಾ. 14ರಂದು ರಥಯಾತ್ರೆ ಆಯೋಜನೆ ಮಾಡಲಾಗಿತ್ತು. ಯಾತ್ರೆಗೆ ಹೈದರಾಬಾದ್, ಚೆನ್ನೈ, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳ 600 ಮಂದಿ ಭಾಗವಹಿಸಬೇಕಿತ್ತು. ಆದರೆ ರಾಜ್ಯದಲ್ಲಿ ಕೊರೊನಾ ಭೀತಿ ಆವರಿಸಿದ್ದು, ಜನಜಂಗುಳಿ ಇರುವ ಕಾರ್ಯಕ್ರಮಗಳನ್ನು ಮುಂದೂಡಬೇಕೆಂಬ ಸರ್ಕಾರದ ಅಧಿಸೂಚನೆಯಂತೆ ಸಂಸ್ಥೆ ಹಾಗೂ ಜನರ ಹಿತರಕ್ಷಣೆಗಾಗಿ ರಥಯಾತ್ರೆಯನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.