ಕೊರೊನಾ ಭೀತಿ: ಸಿದ್ದಗಂಗಾ ಮಠದಲ್ಲಿ ಭಕ್ತಗಣವಿಲ್ಲದೆ ಆವರಿಸಿದ ಮೌನ - ಸಿದ್ದಗಂಗಾಮಠದಲ್ಲಿ ಭಕ್ತಗಣ ವಿಲ್ಲದೆ ಆವರಿಸಿದ ಮೌನ
🎬 Watch Now: Feature Video
ತುಮಕೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭಕ್ತರು ಹಾಗೂ ವಿದ್ಯಾರ್ಥಿಗಳು ಬರುತ್ತಿಲ್ಲ. ಹೀಗಾಗಿ ಮಠದ ತುಂಬೆಲ್ಲ ನೀರವ ಮೌನ ಆವರಿಸಿದೆ. ಸದಾ ಸಾವಿರಾರು ಮಂದಿ ಕುಳಿತು ಊಟ ಮಾಡುತ್ತಿದ್ದ ಸ್ಥಳದಲ್ಲಿ ಇದೀಗ ಮಠದ ಸಿಬ್ಬಂದಿ, ಮಠದ ಕೆಲವೇ ವಿದ್ಯಾರ್ಥಿಗಳು ಕುಳಿತು ಊಟ ಮಾಡುತ್ತಿದ್ದಾರೆ. ಇನ್ನು ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆಯಲು ಬೆರಳೆಣಿಕೆಯಷ್ಟು ಜನ ಆಗಮಿಸುತ್ತಿರುವುದು ಗಮನಾರ್ಹವಾಗಿದೆ.