ಕೃಷ್ಣನಗರಿಗೂ ತಟ್ಟಿದ ಕೊರೊನಾ ಭೀತಿ... ಕೃಷ್ಣಮಠ ಈಗ ಖಾಲಿ ಖಾಲಿ - ಉಡುಪಿ ಕೃಷ್ಣಮಠ ಸುದ್ದಿ
🎬 Watch Now: Feature Video

ಪೊಡವಿಗೊಡೆಯ ಉಡುಪಿ ತಾಣಕ್ಕೂ ಕೊರೊನಾ ವೈರಸ್ ಭೀತಿ ತಟ್ಟಿದೆ. ಸದಾ ಭಕ್ತರ ಗುಂಗಲ್ಲೇ ನಲಿದಾಡುತ್ತಿದ್ದ ಕೃಷ್ಣ ಮಠ ಇದೀಗ ಖಾಲಿ ಖಾಲಿಯಾಗಿ ಕಾಣುತ್ತಿದೆ. ಕೊರೊನಾ ವೈರಸ್ ಭೀತಿ ಧಾರ್ಮಿಕ ತಾಣಗಳಿಗೂ ತಟ್ಟಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬರುವ ಭಕ್ತರ ಸಂಖ್ಯೆ ತೀರ ಇಳಿಮುಖವಾಗಿದೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಪ್ರವಾಸಿಗರು ಕೃಷ್ಣನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ರಥೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆದರೆ ಕೊರೊನಾ ಹಾವಳಿ ಜನರ ಭಕ್ತಿಗೇ ಅಡ್ಡಿಯಾಗಿದೆ. ಈ ಕುರಿತು ಈಟಿವಿ ಭಾರತ ಉಡುಪಿ ಪ್ರತಿನಿಧಿ ಕಂಪ್ಲೀಟ್ ಮಾಹಿತಿಯನ್ನು ನೀಡಿದ್ದಾರೆ.