ಈ ಕೋಳಿಮರಿಗೆ ಎರಡಲ್ಲ ಐದು ಕಾಲುಗಳು: ವಿಡಿಯೋ ವೈರಲ್ - bantwala latest news
🎬 Watch Now: Feature Video
ಬಂಟ್ವಾಳ: ತಾಲೂಕಿನ ಮೂಡುನಡುಗೋಡು ಎಂಬಲ್ಲಿನ ವ್ಯಕ್ತಿವೋರ್ವರ ಮನೆಯಲ್ಲಿ ಮೊಟ್ಟೆಯೊಡೆದು ಹೊರಬಂದ ಕೋಳಿಮರಿಗೆ ಎರಡು ಕಾಲುಗಳ ಬದಲಿಗೆ 5 ಕಾಲುಗಳು ಕಂಡುಬಂದಿವೆ. ಮರಿಯಾಗಲೆಂದು 15 ಮೊಟ್ಟೆಗಳನ್ನು ಇಟ್ಟು ತಾಯಿ ಕೋಳಿಯನ್ನು ಕಾವಿಗೆ ಕೂರಿಸಲಾಗಿತ್ತು. 15 ಮೊಟ್ಟೆಗಳ ಪೈಕಿ ನಿನ್ನೆ 12 ಕೋಳಿ ಮರಿಗಳ ಜನನವಾಗಿದ್ದು, ಅದರಲ್ಲಿ ಒಂದು ಮರಿಗೆ ಮಾತ್ರ 5 ಕಾಲುಗಳಿವೆ ಎಂದು ತಿಳಿದುಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.