ಚಾಮುಂಡೇಶ್ವರಿ ರಥೋತ್ಸವ: ಕುಶಾಲತೋಪು ಹಾರಿಸಿ ಗೌರವ - ಚಾಮುಂಡೇಶ್ವರಿ ರಥೋತ್ಸವ
🎬 Watch Now: Feature Video
ಮೈಸೂರು: ತಾಯಿ ಚಾಮುಂಡೇಶ್ವರಿ ರಥೋತ್ಸವಕ್ಕೆ ಇಂದು ಯದುವೀರ್ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು. ಈ ರಥೋತ್ಸವಕ್ಕೆ ಜನ ಸಾಗರವೇ ಹರಿದುಬಂದಿತ್ತು. ಈ ವೇಳೆ ಕುಶಾಲತೋಪುಗಳನ್ನು ಹಾರಿಸಿ ಗೌರವ ಸೂಚಿಸುವ ಸಂಪ್ರದಾಯವನ್ನು ರಾಜ ಮಹಾರಾಜರುಗಳ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಚಾಮುಂಡೇಶ್ವರಿ ಮಹಾ ರಥೋತ್ಸವದ ದಿನ ರಥೋತ್ಸವ ಸಾಗುವ ದೇವಾಲಯದ ಸುತ್ತ 21 ಕುಶಾಲತೋಪುಗಳನ್ನು ಹಾರಿಸಿ ಚಾಮುಂಡಿ ತಾಯಿಗೆ ಗೌರವ ಸೂಚಿಸಲಾಯಿತು. ಈ ರೀತಿ ಗೌರವ ಸೂಚಿಸುವ ಏಕೈಕ ದೇವಾಲಯ ಎಂಬ ಕೀರ್ತಿ ಚಾಮುಂಡೇಶ್ವರಿ ದೇವಾಲಯಕ್ಕೆ ಸಲ್ಲುತ್ತದೆ. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.
Last Updated : Oct 13, 2019, 1:45 PM IST