ಕೊರೊನಾ ಹೋರಾಟಗಾರರ ಸೇವೆಯಲ್ಲಿ ಉದ್ಯಮಿ! ಇವರೂ ವಾರಿಯರ್​ ಅಲ್ವೇ? - ಯಾದಗಿರಿ ಕೊರೊನಾ ಸುದ್ದಿ

🎬 Watch Now: Feature Video

thumbnail

By

Published : May 5, 2020, 9:03 PM IST

ಯಾದಗಿರಿ: ಕೋವಿಡ್-19 ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಜಿಲ್ಲೆಯ ಕೊರೊನಾ ವಾರಿಯರ್ಸ್‌ಗೆ ಉದ್ಯಮಿಯೊಬ್ಬರು ಲಾಕ್​ಡೌನ್ ಪ್ರಾರಂಭವಾಗಿನಿಂದಲೂ ಪ್ರತಿನಿತ್ಯ ಮಜ್ಜಿಗೆ, ಟೀ ಹಾಗೂ ಶುದ್ಧ ಕುಡಿಯುವ ನೀರು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ನಗರದ ದರ್ಶನ್ ಗಾಂಧಿ ಎಂಬ ಉದ್ಯಮಿ, ವಾರಿಯರ್​ಗಳಿರುವ ಕರ್ತವ್ಯ ನಿರತ ಸ್ಥಳಗಳಿಗೆ ತಮ್ಮ ಮಕ್ಕಳೊಂದಿಗೆ ಬೈಕ್ ಮೂಲಕ ತೆರಳಿ ಅವರಿಗೆ ಟೀ, ಕಾಫಿ, ಮಜ್ಜಿಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಮೊದಲು ಸ್ಯಾನಿಟೈಸರ್​ನಿಂದ ಕೈ ಸ್ವಚ್ಛಗೊಳಿಸಿದ ಬಳಿಕ ಅವರಿಗೆ ಈ ದ್ರವ್ಯ ಆಹಾರ ನೀಡುತ್ತಿದ್ದಾರೆ. ಕೊರೊನಾ ಹೋರಾಟಗಾರರ ಸೇವೆ ಸಲ್ಲಿಸುತ್ತಿರುವ ದರ್ಶನ್​ ಗಾಂಧಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.