'ಗೆಳೆತನದ ಪ್ರೀತಿ ಬಡತನದಲಿ ಕಂಡಾಗ' ಕೃತಿ ಲೋಕಾರ್ಪಣೆ - ರಾಯಚೂರು ಜಿಲ್ಲಾ ಸುದ್ದಿ
🎬 Watch Now: Feature Video
ರಾಯಚೂರು ನಗರದ ಕನ್ನಡ ಭವನದಲ್ಲಿಂದು ಅಯ್ಯನಗೌಡ ನಂದಿಹಾಳ ಅವರ ಗೆಳೆತನದ ಪ್ರೀತಿ ಬಡತನದಲಿ ಕಂಡಾಗ ಕೃತಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಆಂಜನೇಯ ಜಾಲಿಬೆಂಚಿ ಉದ್ಘಾಟಿಸಿ ಕೃತಿ ಲೋಕಾರ್ಪಣೆ ಮಾಡಿದರು. ಪುಸ್ತಕದ ಕುರಿತು ಮಾತನಾಡಿದ ಅವರು, ಗ್ರಾಮೀಣ ಜನರ ಸಂಬಂಧಗಳನ್ನು ತಿಳಿಸುವ ಕೆಲಸ ಮಾಡಿರುವ ಅಯ್ಯನಗೌಡರ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಹಿತಿಗಳು, ಸಮಾನ ಮನಸ್ಕರು ಮತ್ತಿತರರು ಭಾಗವಹಿಸಿದ್ದರು.