ಮಂಗಳೂರಿನಲ್ಲಿ ಅದ್ಧೂರಿ ಆಯುಧ ಪೂಜೆ: ವಾಹನಗಳಿಗೆ ಪೂಜೆ ನೆರವೇರಿಸಿದ ಸಾವಿರಾರು ಭಕ್ತರು - mangalore ayudha pooje
🎬 Watch Now: Feature Video
ಮಂಗಳೂರು : ನವರಾತ್ರಿ ಹಬ್ಬದ 8ನೇ ದಿನವಾದ ಇಂದು ನಗರದ ಜನರು ಸಂಭ್ರಮದಿಂದ ಆಯುಧ ಪೂಜೆ ನೆರವೇರಿಸಿದರು. ತಮ್ಮ ವಾಹನಗಳನ್ನು ಸಿಂಗರಿಸಿ ಪೂಜೆ ಮಾಡುವ ಮೂಲಕ ಒಳಿತಿಗಾಗಿ ದೇವಿಯನ್ನು ಬೇಡಿಕೊಂಡರು. ನಗರದಲ್ಲಿ ದಸರಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಗರ ನಿವಾಸಿಗಳು ತಮ್ಮ ವಾಹನಗಳಿಗೆ ಪೂಜೆ ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂತು. ಅದರಲ್ಲೂ ಹೆಚ್ಚಾಗಿ ಮಂಗಳಾದೇವಿ ದೇವಸ್ಥಾನ ಮತ್ತು ಶರವು ಮಹಾಗಣಪತಿ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ತಮ್ಮ ವಾಹನಗಳಿಗೆ ಪೂಜೆ ಮಾಡುವುದು ಕಂಡುಬಂತು.
Last Updated : Oct 7, 2019, 1:27 PM IST