ಆಡಿಯೋ ಸೋರಿಕೆ ಪ್ರಕರಣ: ಬಿಎಸ್ವೈ, ಅಮಿತ್ ಶಾ ರಾಜೀನಾಮೆಗೆ ಡಿ ಬಸವರಾಜ್ ಆಗ್ರಹ - D Basavaraj press meet in davanagere
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4969565-thumbnail-3x2-megha.jpg)
ದಾವಣಗೆರೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೈತ್ರಿ ಸರ್ಕಾರ ಪತನಕ್ಕೆ ನೇರ ಕಾರಣರಾಗಿದ್ದಾರೆ ಎಂಬುದು ಆಡಿಯೋ ಸೋರಿಕೆಯಿಂದ ಗೊತ್ತಾಗಿದೆ. ಪ್ರಕರಣದ ಹೊಣೆ ಹೊತ್ತು ಬಿಎಸ್ವೈ ಹಾಗೂ ಶಾ ರಾಜೀನಾಮೆ ನೀಡಬೇಕು ಎಂದು ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಡಿ ಬಸವರಾಜ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಬಸವರಾಜ್, ಆಡಿಯೋ ಸೋರಿಕೆ ಬಳಿಕ ಬಿಜೆಪಿ ಈಗ ದೇಶದ ಮುಂದೆ ಬೆತ್ತಲಾಗಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಎಲ್ಲಾ ಸಾಂವಿಧಾನಿಕ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಇದರಿಂದ ಬಯಲಾಗಿದೆ. ಈ ಆಡಿಯೋವನ್ನು ಪ್ರಕರಣದ ಸಾಕ್ಷ್ಯವಾಗಿ ಪರಿಗಣಿಸುವುದಾಗಿ ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಒಪ್ಪಿಕೊಂಡಿದೆ. ಈ ಹಿನ್ನೆಲೆ ನೈತಿಕ ಹೊಣೆ ಹೊತ್ತು ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
TAGGED:
ಬಿಎಸ್ವೈ ಆಡಿಯೋ ಸೋರಿಕೆ ಪ್ರಕರಣ