ನೇತ್ರಾವತಿ ನದಿಗೆ ಹಾರಿ ಯುವಕನಿಂದ ಆತ್ಮಹತ್ಯೆಗೆ ಯತ್ನ... ಮೀನುಗಾರರಿಂದ ರಕ್ಷಣೆ - mangalore
🎬 Watch Now: Feature Video
ಬೆಂಗಳೂರು ಮೂಲದ ಯುವಕನೋರ್ವ ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಸಂಜೆ 5.30 ಸುಮಾರಿಗೆ ನಡೆದಿದೆ. ಮೂಲತಃ ಬೆಂಗಳೂರು ನಿವಾಸಿ, ಪ್ರಸ್ತುತ ನಾಗುರಿಯಲ್ಲಿರುವ ಪದ್ಮರಾಜ್ (18) ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದೆ. ನಗರದಲ್ಲಿ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪದ್ಮರಾಜ, ಶುಕ್ರವಾರ ಸಂಜೆ ಏಕಾಏಕಿ ಸೇತುವೆ ಮೇಲಿನಿಂದ ನದಿಗೆ ಹಾರಿದ್ದು, ಕೂಡಲೇ ಸ್ಥಳೀಯ ಮೀನುಗಾರರು ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಂಕನಾಡಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.